19 Apr

MERCY HILL, HEGGALA, KODAGU

ಹೆಗ್ಗಳ ಸಂತ ಜ್ಯೂಡ್ ಪುಣ್ಯ ಕ್ಷೇತ್ರದಲ್ಲಿ ಭಕ್ತಿ ಪೂರ್ವಕ 48ನೇ ವರ್ಷದ ಶಿಲುಬೆಯ ಹಾದಿ.

ಹೆಗ್ಗಳ : ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಮುಖ ಧಾರ್ಮಿಕ ಕೇಂದ್ರ ಹೆಗ್ಗಳ ಸಂತ ಜ್ಯೂಡ್ ಪುಣ್ಯ ಕ್ಷೇತ್ರದಲ್ಲಿ ಕ್ರೈಸ್ತರ ಪ್ರಮುಖ ಧಾರ್ಮಿಕ ದಿನ ಶುಭ ಶುಕ್ರವಾರ (ಗುಡ್ ಫ್ರೈಡೆ) ಅನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಬೆಳಗ್ಗಿನ ಜಾವ ಒಂಬತ್ತು ಘಂಟೆಗೆ ಆರಂಭವಾದ ಪೂಜಾ ವಿಧಿಗಳಲ್ಲಿ ಸಾವಿರಾರು ಮಂದಿ ನಾಡಿನ ವಿವಿಧ ಕಡೆಗಳಿಂದ ಭಕ್ತರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಪೂಜಾ ವಿಧಿಗಳಿಗೆ ಪುಣ್ಯ ಕ್ಷೇತ್ರದ ವಂದನಿಯ ಫಾ ರೋಷನ್ ಜೋಸೆಫ್, ರೆ. ಫಾ ಜೋಸೆಫ್ ಚೀರನ್, ರೆ ಫಾ ತೋಮಸ್ ಸಿ ಎಂ ಐ ನೇತೃತ್ವವಹಿದ್ದರು. ಪ್ರಭು ಕ್ರಿಸ್ತರ ಯಾತನೆಗಳನ್ನು ಸ್ಮರಿಸುತ್ತಾ ಇಲ್ಲಿನ ಪವಿತ್ರ ಬೆಟ್ಟಕ್ಕೆ ಶಿಲುಬೆಯ ಹಾದಿಯಾಗಿ ಕೊಡಗಿನ ವಿವಿಧ ಭಾಗಗಳಿಂದ ಬಂದ ಸಾವಿರಾರು ಜನರು  ಭಕ್ತಿಯಿಂದ ಪಾಲ್ಗೊಂಡರು. ಮಧ್ಯಾಹ್ನ ಅನ್ನ ಸಂತರ್ಪಣೆಯೊಂದಿಗೆ ವಿಧಿ ವಿಧಾನಗಳು ಮುಕ್ತಾಯಗೊಂಡಿತು